ಜನ ನೋಟ
ರಾಜ್ಯ

ಮತದಾರರು ಪಟ್ಟಿಯಿಂದ ಹೊರಗೆ


ವರದಿ: ಸನತ್ ಶಿವಮೊಗ್ಗ 

ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ರಾಜ್ಯಾದ್ಯಂತ ಒಟ್ಟು 1.07 ಕೋಟಿಗೂ ಅಧಿಕ ಮತದಾರರು ಪಟ್ಟಿಯಿಂದ ಹೊರಬಿದ್ದಿದ್ದಾರೆ. ಈ ಕುರಿತು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು ಮಾಹಿತಿ ನೀಡಿದ್ದಾರೆ.

ಜೂನ್ 30ರಿಂದ ಆಗಸ್ಟ್ 17ರವರೆಗೆ ರಾಜ್ಯಾದ್ಯಂತ ಮನೆ ಮನೆಗೆ ತೆರಳಿ ಮತದಾರರ ಪರಿಶೀಲನೆ ನಡೆಸಲಾಗಿತ್ತು. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ಮತದಾರರ ಪೈಕಿ 1,07,96,415 ಮತದಾರರನ್ನು (ಶೇ. 19.48) ಎಎಸ್ ಡಿಡಿಒ (ASDDO – ನಾಪತ್ತೆ, ಸ್ಥಳಾಂತರ, ಮೃತ, ನಕಲಿ ಮತ್ತು ಇತರೆ) ವರ್ಗದಲ್ಲಿ ದಾಖಲಿಸಲಾಗಿದೆ.

ಶಾಶ್ವತವಾಗಿ ಸ್ಥಳಾಂತರಗೊಂಡವರು: 65,45,721 (11.81%)
ಮೃತಪಟ್ಟವರು: 16,39,871
ಪತ್ತೆಯಾಗದವರು / ಗೈರಾದವರು: 15,17,056 (2.74%)
ನಕಲಿ / ಈಗಾಗಲೇ ನೋಂದಾಯಿತರು: 7,09,875 (1.28%)
ಫಾರ್ಮ್ ಗಳಿಗೆ ಸಹಿ ಮಾಡಲು ಇಚ್ಛಿಸದವರು: 3,83,892 (0.71%)

ರಾಜ್ಯದ ಒಟ್ಟು ASDDO ಮತದಾರರ ಪೈಕಿ ಶೇಕಡಾ 46.88ರಷ್ಟು ಜನ ಬೆಂಗಳೂರಿನ ನಾಲ್ಕು ಜಿಲ್ಲೆಗಳಲ್ಲೇ ಇದ್ದಾರೆ. ಬಿಬಿಎಂಪಿ ದಕ್ಷಿಣ ಭಾಗದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ಮತದಾರರು ಹೊರಬಿದ್ದಿದ್ದಾರೆ.

Related posts

ಬೆಂಗಳೂರು ಜಯದೇವ ಆಸ್ಪತ್ರೆಯಲ್ಲಿ ಆಗಸ್ಟ್ 15 ರಿಂದ 20ರವರೆಗೆ ಉಚಿತ ಆಂಜಿಯೋಪ್ಲಾಸ್ಟಿ ಶಿಬಿರ

JanaNota Editor

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ‘ಮಂಕಿಮ್ಯಾನ್’ : ಜ್ಯೋತಿರಾಜ್ ಕೈ ಹಿಡಿಯುತ್ತಿರುವ ಯುವತಿ ಯಾರು ಗೊತ್ತಾ?

JanaNota Editor

ಅಕ್ರಮ ಅಡಿಕೆ ಆಮದು ತಡೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಅಮಿತ್ ಶಾಗೆ ಮನವಿ

JanaNota Editor