ಜನ ನೋಟ
ರಾಜ್ಯ

ಪಲ್ಟಿ ಯಾದ ಟ್ರಕ್ : ಗಾಯಗೊಂಡವರಿಗೆ ನೆರವಾಗುವ ಬದಲು 15 ನಿಮಿಷದಲ್ಲಿ ಇಡೀ ಲಾರಿ ಈರುಳ್ಳಿ ದೋಚಿದ ಜನ

ರಾಯಚೂರು: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಬಳಿ ಶನಿವಾರ ಈರುಳ್ಳಿ ತುಂಬಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಇಡೀ ಲಾರಿ ಈರುಳಿ ಜನರ ಪಾಲಾಗಿದೆ.

ಇಂದು ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು, ಲಾರಿ ಚಾಲಕ ಮತ್ತು ಕ್ಲೀನರ್ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆದರೆ, ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಜನರ ವರ್ತನೆ ಮಾತ್ರ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಗಾಯಗೊಂಡ ಚಾಲಕ ಮತ್ತು ಕ್ಲೀನರ್‌ಗೆ ನೆರವಾಗುವ ಬದಲು, ಅಲ್ಲಿದ್ದ ಈರುಳ್ಳಿ ಚೀಲಗಳನ್ನ ಹೊತ್ತೊಯ್ಯಲು ಮುಗಿಬಿದ್ದಿದ್ದಾರೆ.

ಮಾನವೀಯತೆಯನ್ನೇ ಮರೆತು, ಗಾಯಾಳುಗಳ ನೆರವಿಗೆ ಧಾವಿಸದೆ ಈರುಳ್ಳಿ ದೋಚಿದ್ದಾರೆ.

ಕೇವಲ 15 ರಿಂದ 20 ನಿಮಿಷಗಳಲ್ಲೇ ದೊಡ್ಡ ಲಾರಿಯಲ್ಲಿದ್ದ ಸಂಪೂರ್ಣ ಈರುಳ್ಳಿ ಲೋಡ್ ಖಾಲಿಯಾಗಿದೆ. ಜನರು ಚೀಲಗಳಲ್ಲಿ ಈರುಳ್ಳಿ ತುಂಬಿಕೊಂಡು ಹೋಗಿದ್ದು, ಅಪಘಾತದ ಸ್ಥಳದಲ್ಲಿ ಮಾನವೀಯತೆಗಿಂತ ಈರುಳ್ಳಿಯೇ ಮುಖ್ಯವಾದಂತಾಗಿದೆ.

ಮಾನ್ವಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related posts

ಹೆಸರು, ವಿಳಾಸ ಬರೆಯಲೂ ಬಾರದವರಿಗೆ ಸರ್ಕಾರಿ ನೌಕರಿ? – ಫೈವ್‌ಸ್ಟಾರ್ ಹೋಟೆಲ್‌ನಲ್ಲಿ ಪರೀಕ್ಷೆ ಬರೆಸಿದ ಆರೋಪ – ಕೆಪಿಎಸ್‌ಸಿ ಅಕ್ರಮದ ತನಿಖೆ ಚುರುಕು

JanaNota Editor

ಆನ್ಲೈನ್ ಗೇಮ್ ಗಾಗಿ ಹಣಕ್ಕೆ ಸ್ನೇಹಿತರ ಕಿರುಕುಳ : ಮನನೊಂದು 13 ವರ್ಷದ ಬಾಲಕ ನೇಣಿಗೆ ಶರಣು

JanaNota Editor

4 ತಿಂಗಳ ಅವಳಿ ಕಂದಮ್ಮಗಳ ನೀರಲ್ಲಿ ಮುಳುಗಿಸಿ ಹತ್ಯೆ : ತಾಯಿ ಆತ್ಮಹತ್ಯೆಗೆ ಯತ್ನ

JanaNota Editor