ಜನ ನೋಟ
ಶಿವಮೊಗ್ಗ

ಶಿವಮೊಗ್ಗ ನಗರದಲ್ಲಿ 56,463 ಮತದಾರರ ಹೆಸರು ASDDO ಪಟ್ಟಿಗೆ : ನೈಜ ಮತದಾರರ ಮರುಸೇರ್ಪಡೆಗೆ ರಾಷ್ಟ್ರಭಕ್ತರ ಬಳಗ ಕ್ರಮ

ಶಿವಮೊಗ್ಗ : ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಶಿವಮೊಗ್ಗ ನಗರ ವ್ಯಾಪ್ತಿಯ ಒಟ್ಟು 2,77,098 ಮತದಾರರ ಪೈಕಿ 56,463 ಮಂದಿಯ ಹೆಸರುಗಳನ್ನು ASDDO ಪಟ್ಟಿಗೆ ಸೇರಿಸಲಾಗಿದೆ ಎಂದು ರಾಷ್ಟ್ರಭಕ್ತರ ಬಳಗದ ಕೆ.ಇ. ಕಾಂತೇಶ್ ತಿಳಿಸಿದ್ದಾರೆ.

ಮಂಗಳವಾರ ಶಿವಮೊಗ್ಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಪಟ್ಟಿಯಿಂದ ಕೈಬಿಡಲ್ಪಟ್ಟಿರುವ ನೈಜ ಮತದಾರರನ್ನು ಗುರುತಿಸಿ ಮರುಸೇರ್ಪಡೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ನಗರದ 288 ಬೂತ್‌ಗಳಲ್ಲೂ ಇಬ್ಬರು ಮಹಿಳಾ ಹಾಗೂ ಇಬ್ಬರು ಪುರುಷ ಕಾರ್ಯಕರ್ತರನ್ನು ಗುರುತಿಸಿ ತರಬೇತಿ ನೀಡಲಾಗಿದೆ. ಕರಡು ಪಟ್ಟಿ ಪ್ರಕಟವಾದ ಬಳಿಕ ಕಾರ್ಯಕರ್ತರು ಬೂತ್ ಮಟ್ಟದ ಅಧಿಕಾರಿಗಳೊಂದಿಗೆ ಮನೆ ಮನೆಗೆ ತೆರಳಿ ಮತದಾರರ ಹೆಸರುಗಳನ್ನು ಪರಿಶೀಲಿಸಲಿದ್ದಾರೆ ಎಂದು ಹೇಳಿದರು.

ಸ್ಥಳಾಂತರ, ಮರಣ, ಎರಡು ಕಡೆ ಹೆಸರು ಇರುವುದು ಸೇರಿದಂತೆ ವಿವಿಧ ಕಾರಣಗಳಿಂದ ಹೆಸರುಗಳು ಪಟ್ಟಿಯಿಂದ ಕೈಬಿಡಲಾಗಿದೆ. ನೈಜ ಮತದಾರರ ಹೆಸರು ಕೈಬಿಟ್ಟಿದ್ದರೆ, ಅಗತ್ಯ ದಾಖಲೆಗಳು ಮತ್ತು ನಿಯಮಗಳ ಕುರಿತು ಮಾಹಿತಿ ನೀಡಿ ಮರುಸೇರ್ಪಡೆಗೆ ನೆರವಾಗಲಾಗುವುದು ಎಂದರು.

ಆಗಸ್ಟ್ 30ರಂದು PACE ಕಾಲೇಜಿನ ಸಭಾಂಗಣದಲ್ಲಿ ಕಾರ್ಯಕರ್ತರಿಗೆ ತರಬೇತಿ ನೀಡಲಾಗುವುದು. ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ BLO ಹಾಗೂ BLAಗಳ ಮೂಲಕ ಮತದಾರರ ಪಟ್ಟಿಗೆ ಸಂಬಂಧಿಸಿದ ಗೊಂದಲಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈಶ್ವರಪ್ಪ ಮಾತನಾಡಿ, 56 ಸಾವಿರಕ್ಕೂ ಅಧಿಕ ಹೆಸರುಗಳು ಕೈಬಿಡಲ್ಪಟ್ಟಿರುವ ಹಿನ್ನೆಲೆಯಲ್ಲಿ ಬೂತ್ ಮಟ್ಟದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ. ಚುನಾವಣಾ ಆಯೋಗದಿಂದ ನೋಟಿಸ್ ಬಂದಲ್ಲಿ ಅದರ ಪರಿಶೀಲನೆ ಹಾಗೂ ಅಗತ್ಯ ಸಹಕಾರಕ್ಕಾಗಿ ಮಾಹಿತಿ ಕೇಂದ್ರ ಆರಂಭಿಸಲಾಗುವುದು ಎಂದರು.

ನೈಜ ಮತದಾರರ ಹೆಸರುಗಳು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಕ್ರಮ ಕೈಗೊಂಡು, ಸಾಧ್ಯವಾದಷ್ಟು ಹೆಚ್ಚಿನ ಅರ್ಹ ಮತದಾರರ ಹೆಸರುಗಳನ್ನು ಮರುಸೇರ್ಪಡೆಗೊಳಿಸುವ ಪ್ರಯತ್ನ ಮಾಡಲಾಗುವುದು ಎಂದು ಅವರು ಹೇಳಿದರು.

Related posts

ಆ.16ರಂದು ವೀರಶೈವ ಲಿಂಗಾಯತ ವಿದ್ಯಾರ್ಥಿ ನಿಲಯದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ

JanaNota Editor

ಮಂಡಿನೋವು ತಪಾಸಣಾ ಶಿಬಿರ ಸೆ.15ರಿಂದ 19ರವರೆಗೆ ವಿಸ್ತರಣೆ

JanaNota Editor

ಭದ್ರಾವತಿ : ಕರ್ತವ್ಯಕ್ಕೆ ತೆರಳುತ್ತಿದ್ದ ಹೋಂ ಗಾರ್ಡ್‌ ಬೈಕ್ ಗೆ ಗುದ್ದಿದ ಕಾರು : ಸ್ಥಳದಲ್ಲೇ ಸಾವು, ಮತ್ತೊಬ್ಬರಿಗೆ ಗಂಭೀರ ಗಾಯ

JanaNota Editor