ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಆಪ್ತರಾದ ನಟ ಚಿಕ್ಕಣ್ಣ ಹಾಗೂ ಯಶಸ್ ಅವರು ಬೆಂಗಳೂರಿನ 59ನೇ ಸಿಸಿಹೆಚ್ ಕೋರ್ಟಿಗೆ ಹಾಜರಾಗಿದ್ದಾರೆ.
ಕೋರ್ಟ್ ನೀಡಿದ್ದ ಸಮನ್ಸ್‌ನ ಹಿನ್ನೆಲೆಯಲ್ಲಿ ಇಬ್ಬರೂ ವಿಚಾರಣೆಗೆ ಆಗಮಿಸಿದ್ದು, ಈ ವೇಳೆ ನ್ಯಾಯಾಲಯದಲ್ಲಿ ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಯಿತು.
ಪ್ರಕರಣದ ಸಿಇ80 ಸಾಕ್ಷಿಯಾಗಿರುವ ನಟ ಚಿಕ್ಕಣ್ಣ, ರೇಣುಕಾಸ್ವಾಮಿ ಕೊಲೆ ನಡೆದ ದಿನದಂದು ಸ್ಟೋನಿ ಬ್ರೂಕ್ಸ್ ರೆಸ್ಟೋರೆಂಟ್‌ನಲ್ಲಿ ನಡೆದ ಪಾರ್ಟಿಯಲ್ಲಿ ಉಪಸ್ಥಿತರಿದ್ದರು.
ಕೋರ್ಟ್‌ನಲ್ಲಿ ಪ್ರಮಾಣ ಸ್ವೀಕರಿಸಿ ಸಾಕ್ಷ್ಯ ನುಡಿಯಲು ಆರಂಭಿಸಿದ ಚಿಕ್ಕಣ್ಣ ಕೆಲವೇ ಕ್ಷಣಗಳಲ್ಲಿ ತಡವರಿಸಿದರು. ಇದನ್ನು ಗಮನಿಸಿದ ನ್ಯಾಯಾಧೀಶರು, “ಯಾಕೆ ಸಹಜವಾಗಿ ಹೇಳಿಕೆ ನೀಡುತ್ತಿಲ್ಲ?” ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಚಿಕ್ಕಣ್ಣ ತಮಗೆ ಸ್ವಲ್ಪ ಟೆನ್ಶನ್ ಆಗುತ್ತಿರುವುದಾಗಿ ಒಪ್ಪಿಕೊಂಡರು. ಕೂಡಲೇ ಸ್ಪಂದಿಸಿದ ನ್ಯಾಯಾಧೀಶರು 10 ನಿಮಿಷ ವಿಶ್ರಾಂತಿ ಪಡೆದು ರಿಲ್ಯಾಕ್ಸ್ ಆಗುವಂತೆ ಸೂಚಿಸಿದರು. ಅಲ್ಲದೆ, ವಕೀಲರು ಸಹ ಚಿಕ್ಕಣ್ಣ ಅವರಿಗೆ ಧೈರ್ಯ ತುಂಬಿ ಗಾಬರಿಯಾಗುವ ಅಗತ್ಯವಿಲ್ಲ ಎಂದು ಸಮಾಧಾನಪಡಿಸಿದರು.
