ಜನ ನೋಟ
Headlines

ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ.ಸುಧಾ ಯಾದವ್ ನೇಮಕ – ಡಾ. ಸುಧಾ ಯಾದವ್ ಯಾರು?

ಬೆಂಗಳೂರು: ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ಅವರನ್ನು ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.

ಇದರೊಂದಿಗೆ ಹಾಲಿ ರಾಜ್ಯಪಾಲರಾಗಿದ್ದ ಥಾವರ್‌ಚಂದ್ ಗೆಹ್ಲೋಟ್ ಅವರ ಅಧಿಕಾರಾವಧಿಯು ಮುಕ್ತಾಯವಾಗಿದ್ದು, ರಾಜ್ಯದ ಲೋಕಭವನಕ್ಕೆ ಹೊಸ ಸಾಂವಿಧಾನಿಕ ಮುಖ್ಯಸ್ಥರ ಆಗಮನವಾಗಲಿದೆ.

ಕಳೆದ ಕೆಲ ವರ್ಷಗಳಿಂದ ರಾಜ್ಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಥಾವರ್‌ಚಂದ್ ಗೆಹ್ಲೋಟ್ ಅವರ ಜಾಗಕ್ಕೆ ಇದೀಗ ಸುಧಾ ಯಾದವ್ ಅವರನ್ನು ನಿಯೋಜಿಸಲಾಗಿದೆ.

ಆದರೆ, ಹುದ್ದೆಯಿಂದ ನಿರ್ಗಮಿಸುತ್ತಿರುವ ಗೆಹ್ಲೋಟ್ ಅವರಿಗೆ ಕೇಂದ್ರ ಸರ್ಕಾರವಾಗಲಿ ಅಥವಾ ರಾಷ್ಟ್ರಪತಿ ಭವನವಾಗಲಿ ಮುಂದಿನ ಯಾವುದೇ ಹೊಣೆಗಾರಿಕೆಯನ್ನು ಸದ್ಯಕ್ಕೆ ನಿಗದಿಪಡಿಸಿಲ್ಲ.

ಬಿಜೆಪಿಯ ಹಿರಿಯ ನಾಯಕಿ ಮತ್ತು ಸಂಸದೀಯ ಮಂಡಳಿಯ ಸದಸ್ಯೆಯಾದ ನೂತನ ರಾಜ್ಯಪಾಲೆ ಸುಧಾ ಯಾದವ್ ಅವರು ಶೀಘ್ರದಲ್ಲೇ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಡಾ. ಸುಧಾ ಯಾದವ್ ಯಾರು?

ಕರ್ನಾಟಕದ ನೂತನ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರುಬಿಜೆಪಿಯ ಹಿರಿಯ ನಾಯಕಿ ಮತ್ತು ಸಂಸದೀಯ ಮಂಡಳಿಯ ಸದಸ್ಯೆಯಾಗಿದ್ದಾರೆ.

1965ರ ಅಕ್ಟೋಬರ್ 16ರಂದು ಹರಿಯಾಣದ ರೇವಾರಿ ಜಿಲ್ಲೆಯ ಮೋತ್ಲಾ ಕಲಾನ್ ಗ್ರಾಮದಲ್ಲಿ ಜನಿಸಿದ ಇವರು, ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ರೂರ್ಕಿ ವಿಶ್ವವಿದ್ಯಾಲಯದಿಂದ (ಪ್ರಸ್ತುತ ಐಐಟಿ ರೂರ್ಕಿ) ಪಿಎಚ್.ಡಿ ಪದವಿ ಪಡೆದಿದ್ದಾರೆ.

ಇವರು 1999ರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಗಡಿ ಭದ್ರತಾ ಪಡೆಯ (BSF) ಡೆಪ್ಯುಟಿ ಕಮಾಂಡೆಂಟ್ ಸುಖಬೀರ್ ಸಿಂಗ್ ಯಾದವ್ ಅವರ ಪತ್ನಿಯಾಗಿದ್ದಾರೆ.

ರಾಜಕೀಯ ಪ್ರವೇಶ: ಪತಿಯ ಹುತಾತ್ಮರಾದ ನಂತರ, ಅಂದಿನ ಬಿಜೆಪಿ ಹರಿಯಾಣ ರಾಜ್ಯ ಉಸ್ತುವಾರಿಯಾಗಿದ್ದ ನರೇಂದ್ರ ಮೋದಿ ಅವರ ವಿಶೇಷ ವಿನಂತಿಯ ಮೇರೆಗೆ ಇವರು 1999 ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿದರು.

13ನೇ ಲೋಕಸಭೆ ಚುನಾವಣೆಯಲ್ಲಿ ಹರಿಯಾಣದ ಮಹೇಂದ್ರಗಢ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ರಾವ್ ಇಂದರ್ಜಿತ್ ಸಿಂಗ್ ಅವರನ್ನು ಸೋಲಿಸುವ ಮೂಲಕ ಸಂಸತ್ (1999–2004) ಪ್ರವೇಶಿಸಿದರು.

Related posts

ನೇಪಾಳದಲ್ಲಿ ಭೀಕರ ಪ್ರವಾಹ : ಮೃತರ ಸಂಖ್ಯೆ 626ಕ್ಕೆ ಏರಿಕೆ, 2,000 ಜನ ನಾಪತ್ತೆ

JanaNota Editor

ನಿಲ್ಲಿಸಿದ್ದ ಲಾರಿಗೆ ಕಾರು ಡಿಕ್ಕಿ : ಸ್ಥಳದಲ್ಲೇ ಮೃತಪಟ್ಟ ವಿದ್ಯಾರ್ಥಿಗಳು

JanaNota Editor

ರಾಮಮಂದಿರ ದೇಣಿಗೆ ಕಳ್ಳತನ ಆರೋಪ : ಚಂಪತ್ ರಾಯ್, ಅನಿಲ್‌ಗೆ SIT ಕ್ಲೀನ್ ಚಿಟ್

JanaNota Editor