ಜನ ನೋಟ
ರಾಜ್ಯ

ನಾಳೆಯಿಂದ ರಾಜ್ಯಾದ್ಯಂತ ‘108’ ಆಂಬ್ಯುಲೆನ್ಸ್ ಸೇವೆ ಬಂದ್: ಸಿಬ್ಬಂದಿಯಿಂದ ಸಾಮೂಹಿಕ ರಾಜೀನಾಮೆ ಎಚ್ಚರಿಕೆ!

ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ನೀಡಿದ್ದ 15 ದಿನಗಳ ಗಡುವು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ‘108’ ಆರೋಗ್ಯ ಕವಚ ಆಂಬ್ಯುಲೆನ್ಸ್ ಸಿಬ್ಬಂದಿ, ನಾಳೆ (ಸೆ.22) ರಾತ್ರಿ 8 ಗಂಟೆಯ ನಂತರ ರಾಜ್ಯಾದ್ಯಂತ 108 ಆಂಬ್ಯುಲೆನ್ಸ್ ಸೇವೆ ಸ್ಥಗಿತಗೊಳಿಸಿ, ಸಾಮೂಹಿಕ ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ.

ಸಿಬ್ಬಂದಿಯ ಪ್ರಮುಖ ಬೇಡಿಕೆಗಳೇನು?

ವೇತನ ಹೆಚ್ಚಳ: ಒಪ್ಪಂದದ ಪ್ರಕಾರ ಪ್ರತಿ ವರ್ಷ ನೌಕರರ ವೇತನವನ್ನು ಪರಿಷ್ಕರಿಸಬೇಕು.

ಏಕರೂಪ ವೇತನ ವ್ಯವಸ್ಥೆ: ವಲಯವಾರು ವಿಂಗಡಣೆಯನ್ನು ರದ್ದುಗೊಳಿಸಿ, ಜ್ಯೇಷ್ಠತೆ (Seniority) ಆಧಾರದ ಮೇಲೆ ಎಲ್ಲರಿಗೂ ಸಮಾನ ವೇತನ ನೀಡಬೇಕು.

ಸಮಯಕ್ಕೆ ಸರಿಯಾಗಿ ಪಾವತಿ: ಕಾರ್ಮಿಕ ಇಲಾಖೆಯ ನಿಯಮಾವಳಿಯಂತೆ ಪ್ರತಿ ತಿಂಗಳ 7ನೇ ತಾರೀಖಿನೊಳಗೆ ವೇತನ ಸಿಗಬೇಕು.

ಮೂಲಸೌಕರ್ಯ: 3 ಶಿಫ್ಟ್‌ಗಳಲ್ಲಿ ಕೆಲಸ ಮಾಡಲು ಅವಕಾಶ ನೀಡಬೇಕು. ಇದರೊಂದಿಗೆ ಎಲ್ಲಾ ಕಾರ್ಯಸ್ಥಳಗಳಲ್ಲಿ ವಿಶ್ರಾಂತಿ ಕೊಠಡಿ, ಶೌಚಾಲಯ ಹಾಗೂ ಆಂಬುಲೆನ್ಸ್ ಸ್ವಚ್ಛಗೊಳಿಸಲು ನೀರಿನ ವ್ಯವಸ್ಥೆ ಮಾಡಿಕೊಡಬೇಕು.

ಪರಿಹಾರ ಧನ: ಕರ್ತವ್ಯದ ಅವಧಿಯಲ್ಲಿ ಅಪಘಾತಕ್ಕೀಡಾಗಿ ಮೃತಪಡುವ ಸಿಬ್ಬಂದಿ ಕುಟುಂಬಕ್ಕೆ ₹50 ಲಕ್ಷ ಪರಿಹಾರ ಧನ ನೀಡಬೇಕು.

ರಾಜ್ಯಾದ್ಯಂತ ನೌಕರರು ಸಾಮೂಹಿಕವಾಗಿ ಸೇವೆ ಬಂದ್ ಮಾಡಿ ರಾಜೀನಾಮೆ ನೀಡಲು ಮುಂದಾಗಿರುವುದರಿಂದ ನಾಳೆಯಿಂದ ತುರ್ತು ವೈದ್ಯಕೀಯ ಸೇವೆ ಹಾಗೂ ಆಂಬ್ಯುಲೆನ್ಸ್ ಸಂಚಾರದಲ್ಲಿ ತೀವ್ರ ವ್ಯತ್ಯಯ ಉಂಟಾಗುವ ಆತಂಕ ಎದುರಾಗಿದೆ.

Related posts

ಗುಟ್ಕಾ, ಪಾನ್‌ ಮಸಾಲ ಮೇಲಿನ ಒಂದು ವರ್ಷದ ನಿಷೇಧ: ಆದೇಶ ಹಿಂಪಡೆದ ಸಿಎಂ ಡಿ ಕೆ ಶಿವಕುಮಾರ್

JanaNota Editor

ರಾಜ್ಯದ ಜನರಿಗೆ ವಿದ್ಯುತ್ ದರ‌ ಏರಿಕೆಯ ಶಾಕ್; ಪ್ರತಿ ಯೂನಿಟ್‌ಗೆ 40-50 ಪೈಸೆ ಹೆಚ್ಚಳ

JanaNota Editor

ಮೊಬೈಲ್ ರೀಚಾರ್ಜ್ ನಿಯಮದಲ್ಲಿ ಟ್ರಾಯ್ ಬದಲಾವಣೆ: ಡೇಟಾ ಇಲ್ಲದ ಪ್ಲ್ಯಾನ್‌ಗಳಿಗೆ ಹೆಚ್ಚಿನ ಆಯ್ಕೆ

JanaNota Editor