ಜನ ನೋಟ
Headlines

ತಮಿಳುನಾಡು ಶಾಸಕರಿಗೆ ಹೊಸ ಕಾರು, ಚಾಲಕರ ಭತ್ಯೆ ತಿಂಗಳಿಗೆ 75 ಸಾವಿರ ರೂ.

ಚೆನ್ನೈ: ತಮಿಳುನಾಡಿನ ಎಲ್ಲಾ ಶಾಸಕರಿಗೆ ಕ್ಷೇತ್ರ ಪ್ರವಾಸ ಹಾಗೂ ಜನರ ಸಮಸ್ಯೆಗಳನ್ನು ಆಲಿಸಲು ಅನುಕೂಲವಾಗುವಂತೆ ಹೊಸ ಕಾರುಗಳನ್ನು ಒದಗಿಸುವುದಾಗಿ ಮುಖ್ಯಮಂತ್ರಿ ವಿಜಯ್ ವಿಧಾನಸಭೆಯಲ್ಲಿ ಬುಧವಾರ ಘೋಷಿಸಿದ್ದಾರೆ.

ಶಾಸಕರು ತಮ್ಮ ಕ್ಷೇತ್ರಗಳಿಗೆ ನಿಯಮಿತವಾಗಿ ತೆರಳಿ ಜನರ ಸಮಸ್ಯೆಗಳನ್ನು ಪರಿಹರಿಸಬೇಕಾಗಿರುವುದರಿಂದ ಅಗತ್ಯ ಸಾರಿಗೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಹೊಸ ಕಾರಿನ ಜತೆಗೆ ಚಾಲಕ ವೇತನ ಹಾಗೂ ವಾಹನ ನಿರ್ವಹಣೆಗಾಗಿ ಪ್ರತಿ ತಿಂಗಳು 75 ಸಾವಿರ ರೂ. ನೀಡಲಾಗುವುದು ಎಂದು ಘೋಷಿಸಿದ್ದಾರೆ.ಇದಲ್ಲದೆ, ಪ್ರತಿ ಶಾಸಕರ ಕಚೇರಿಯಲ್ಲಿ ಸಹಾಯಕರನ್ನು ನೇಮಿಸಿಕೊಳ್ಳಲು ತಿಂಗಳಿಗೆ 25 ಸಾವಿರ ರೂ. ನೀಡಲಾಗುವುದು.

ವಿಧಾನಸಭೆಯಲ್ಲಿ VCK ಶಾಸಕಿ ಜ್ಯೋತಿಮಣಿ ಅವರು ಅಗತ್ಯ ಮೂಲಸೌಕರ್ಯಗಳಿಲ್ಲದೆ ಶಾಸಕರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಶಾಸಕರಿಗೆ ಕಾರುಗಳ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ವಿಜಯ್ ಈ ಘೋಷಣೆ ಮಾಡಿದ್ದಾರೆ.

ಹಿಂದಿನ ಸರ್ಕಾರಗಳ ಅವಧಿಯಲ್ಲೂ ಶಾಸಕರು ಇದೇ ಬೇಡಿಕೆಯನ್ನು ಮುಂದಿಟ್ಟಿದ್ದರು. ಆದರೆ ಹಣಕಾಸಿನ ಕೊರತೆಯ ಕಾರಣ ಅದನ್ನು ಪರಿಗಣಿಸಿರಲಿಲ್ಲ ಎಂದು ಹಿರಿಯ ಡಿಎಂಕೆ ಶಾಸಕರೊಬ್ಬರು ತಿಳಿಸಿದ್ದಾರೆ.

ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಮೇಯರ್‌ಗಳು ಹಾಗೂ ಉಪಮೇಯರ್‌ಗಳಿಗೆ ಸರ್ಕಾರಿ ವಾಹನಗಳ ಸೌಲಭ್ಯವಿದೆ. ಆದರೆ ಶಾಸಕರಿಗೆ ಇಂತಹ ವ್ಯವಸ್ಥೆ ಇಲ್ಲ. ಇದರಿಂದ ಪ್ರಮುಖ ಸಂದರ್ಭಗಳಲ್ಲೂ ಕ್ಷೇತ್ರದಲ್ಲಿ ಸಂಚರಿಸಲು ಶಾಸಕರಿಗೆ ತೊಂದರೆಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Related posts

ಪ್ರವಾಹದ ನೀರಿನ ಮೀನು ತಿನ್ನದಂತೆ ಬಿಹಾರ ಸರ್ಕಾರ ಎಚ್ಚರಿಕೆ

JanaNota Editor

21 ವರ್ಷದ ಮಾಡೆಲ್‌ಗೆ ಚೂರಿ ಇರಿದು ಭೀಕರ ಹತ್ಯೆ : ಜಿಮ್ ಟ್ರೇನರ್ ಬಂಧನ

JanaNota Editor

ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ.ಸುಧಾ ಯಾದವ್ ನೇಮಕ – ಡಾ. ಸುಧಾ ಯಾದವ್ ಯಾರು?

JanaNota Editor