ಜನ ನೋಟ
Headlines

ಶೂಟರ್‌ಗಳ ಹಿಸ್ಟ್‌ ಲಿಸ್ಟ್‌ನಲ್ಲಿದ್ದರು ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್, ಆಮಿರ್‌ ಖಾನ್‌ : ಬಯಲಾಯ್ತು ಸ್ಫೋಟಕ ಸತ್ಯ

ಮುಂಬೈ: ನಟ ಟೈಗರ್‌ ಶ್ರಾಫ್‌ ಮೇಲಿನ ದಾಳಿ ಬಳಿಕ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಇದೀಗ ಹಿಂದಿ ಚಿತ್ರರಂಗದ ದಿಗ್ಗಜ ನಟರಾದ ಅಮಿತಾಭ್ ಬಚ್ಚನ್ ಹಾಗೂ ಅಕ್ಷಯ್ ಕುಮಾರ್ ಮತ್ತು ಆಮಿರ್ ಖಾನ್ ಅವರೂ ಸಹ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಹಿಟ್ ಲಿಸ್ಟ್‌ನಲ್ಲಿದ್ದರು ಎಂಬ ಆಘಾತಕಾರಿ ಸತ್ಯ ಮುಂಬೈ ಪೊಲೀಸ್ ತನಿಖೆಯಿಂದ ಬಹಿರಂಗಗೊಂಡಿದೆ.

ಪೊಲೀಸ್ ಮೂಲಗಳ ಪ್ರಕಾರ, ಬಂಧಿತ ಶೂಟರ್‌ಗಳು ಮೊದಲು ಸಲ್ಮಾನ್ ಖಾನ್ ಅವರ ನಿವಾಸದ ಬಳಿ ಪರಿಶೀಲನೆ ನಡೆಸಿದ್ದರು. ಸಲ್ಮಾನ್ ಖಾನ್ ಅವರಿಗೆ ವೈ-ಪ್ಲಸ್ (Y+) ದರ್ಜೆಯ ಕಟ್ಟುನಿಟ್ಟಿನ ಭದ್ರತೆ ಇರುವುದರಿಂದ ದಾಳಿ ಪ್ಲಾನ್‌ ಕೈ ಬಿಡಲಾಗಿತ್ತು.

ಬಳಿಕ ಬಾಲಿವುಡ್‌ನ ಇತರ ಪ್ರಮುಖ ನಟರಾದ ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್ ಮತ್ತು ಆಮಿರ್ ಖಾನ್ ಅವರನ್ನು ಗುರಿಯಾಗಿಸಿಕೊಂಡಿತ್ತು. ಅವರ ದೈನಂದಿನ ಓಡಾಟ ಮತ್ತು ಮನೆಗಳ ಭದ್ರತೆಯ ಬಗ್ಗೆ ಮಾಹಿತಿ ಕಲೆಹಾಕಲು ಆರಂಭಿಸಿತ್ತು.

ಅಮಿತಾಭ್, ಅಕ್ಷಯ್ ಮತ್ತು ಆಮಿರ್ ಅವರ ನಿವಾಸಗಳ ಸುತ್ತ ನಿಗಾ ಇರಿಸಲು ಸ್ಥಳೀಯ ಆಟೋ ರಿಕ್ಷಾ ಚಾಲಕರನ್ನು ಬಳಸಿಕೊಂಡಿದ್ದರು ಎಂಬುದು ಪತ್ತೆಯಾಗಿದೆ. ಸಾಮಾನ್ಯರಂತೆ ನಟರ ಮನೆಗಳ ಮುಂದೆ ಓಡಾಡುತ್ತಾ ಭದ್ರತಾ ಲೋಪಗಳನ್ನು ಹುಡುಕಲು ಯತ್ನಿಸಿದ್ದರು.

ಆದರೆ, ಈ ಮೂವರೂ ಹಿರಿಯ ನಟರ ಬಂಗಲೆಗಳ ಬಳಿಯೂ ಮುಂಬೈ ಪೊಲೀಸರು ಕಟ್ಟುನಿಟ್ಟಿನ ಕಾವಲು ಕಾಯುತ್ತಿರುವುದರಿಂದ ಮತ್ತು ಅವರ ಸುತ್ತಲೂ ವೈಯಕ್ತಿಕ ಭದ್ರತಾ ಸಿಬ್ಬಂದಿಯ ದಟ್ಟಣೆ ಇದ್ದಿದ್ದರಿಂದ, ಶೂಟರ್‌ಗಳಿಗೆ ನಟರನ್ನು ಸುಲಭವಾಗಿ ತಲುಪಲು ಸಾಧ್ಯವಾಗಿರಲಿಲ್ಲ.

ದೊಡ್ಡ ನಟರ ಭದ್ರತೆಯನ್ನು ಭೇದಿಸಲು ಸಾಧ್ಯವಾಗದ ಬಿಷ್ಣೋಯ್ ಗ್ಯಾಂಗ್, ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಲು ಕೊಂಚ ಕಡಿಮೆ ಭದ್ರತೆ ಹೊಂದಿರುವ ಯುವ ನಟರನ್ನು ಟಾರ್ಗೆಟ್ ಮಾಡಲು ನಿರ್ಧರಿಸಿತ್ತು.

ಈ ಹಿನ್ನೆಲೆಯಲ್ಲಿ ನಟ ಟೈಗರ್ ಶ್ರಾಫ್ ಅವರ ಓಡಾಟದ ಮೇಲೆ ನಿಗಾ ಇಟ್ಟಿದ್ದ ಶೂಟರ್‌ಗಳು, ಇತ್ತೀಚೆಗೆ ಅವರ ಕಾರನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದರು.

ಇದೀಗ ಮುಂಬೈ ಸಶಸ್ತ್ರ ಪೊಲೀಸ್ ಪಡೆ ಮತ್ತು ಕ್ರೈಮ್ ಬ್ರಾಂಚ್ ಅಧಿಕಾರಿಗಳು ಜಂಟಿ ಸಭೆ ನಡೆಸಿದ್ದಾರೆ. ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್ ಹಾಗೂ ಆಮಿರ್ ಖಾನ್ ಅವರ ನಿವಾಸಗಳ ಸುತ್ತ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

ಹಬ್ಬಗಳ ಸೀಸನ್ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಟರು ಭಾಗವಹಿಸುವಾಗ ಹೆಚ್ಚುವರಿ ಮುನ್ನೆಚ್ಚರಿಕೆ ವಹಿಸುವಂತೆ ಪೊಲೀಸರು ನಟರ ವೈಯಕ್ತಿಕ ಭದ್ರತಾ ತಂಡಗಳಿಗೆ ಸೂಚನೆ ನೀಡಿದ್ದಾರೆ.

Related posts

ಸಿಜೆಪಿ ಪ್ರತಿಭಟನೆಗೆ ಬೆಂಬಲ ನೀಡಿದ ಇಮ್ರಾನ್ ಖಾನ್: ಅಕ್ಟೋಬರ್ 28 ರೊಳಗೆ ಭಾರತ ತೊರೆಯುವಂತೆ ನೋಟಿಸ್

JanaNota Editor

ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಬ್ರೇಕ್ : ಧರಣಿ ಸ್ಥಳಗಳ ಪಟ್ಟಿಯಿಂದ ಕೈಬಿಟ್ಟ ದೆಹಲಿ ಪೊಲೀಸರು

JanaNota Editor

ಶಿವಮೊಗ್ಗ ದಸರಾ ಆನೆ ಘಟನೆ: ವೈಜ್ಞಾನಿಕ ವರದಿ ಬಳಿಕ ಮುಂದಿನ ಕ್ರಮ: ಸಚಿವ ಮಧು ಬಂಗಾರಪ್ಪ

JanaNota Editor