ಜನ ನೋಟ
ಶಿವಮೊಗ್ಗ

ಶಿವಮೊಗ್ಗ : ರೈಲು ನಿಲ್ದಾಣದ ಪ್ರೀ-ಪೇಯ್ಡ್ ಆಟೋಗಳಿಗೆ ಪೊಲೀಸರ ದಿಢೀರ್ ತಪಾಸಣೆ

ನಿಗದಿತ ದರಕ್ಕಿಂತ ಹೆಚ್ಚುವರಿ ಹಣ ಪಡೆಯದಂತೆ ಆಟೋ ಚಾಲಕರಿಗೆ ಎಚ್ಚರಿಕೆ

ಶಿವಮೊಗ್ಗ : ನಗರದ ರೈಲ್ವೆ ನಿಲ್ದಾಣದ ಪ್ರೀ-ಪೇಯ್ಡ್ ಆಟೋ ಕೌಂಟರ್‌ನಿಂದ ಟಿಕೆಟ್ ಪಡೆದು ಆಟೋದಲ್ಲಿ ಪ್ರಯಾಣಿಸಿದ ಬಳಿಕ, ನಿಗದಿತ ದರಕ್ಕಿಂತ ಹೆಚ್ಚುವರಿ ಹಣ ಪಾವತಿಸುವಂತೆ ಕೆಲವು ಆಟೋ ಚಾಲಕರು ಒತ್ತಾಯಿಸುತ್ತಿದ್ದಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಶಿವಮೊಗ್ಗ ಸಂಚಾರ ಪೊಲೀಸರು ದಿಢೀರ್ ತಪಾಸಣೆ ನಡೆಸಿದರು.

ಸೆ.30ರ ಬೆಳಗಿನ ಜಾವ 4.30 ಗಂಟೆಯಿಂದ ರೈಲ್ವೆ ನಿಲ್ದಾಣದ ಆವರಣದಲ್ಲಿದ್ದ ಆಟೋಗಳನ್ನು ಅನಿರೀಕ್ಷಿತವಾಗಿ ತಪಾಸಣೆ ನಡೆಸಲಾಯಿತು. ಈ ವೇಳೆ ಪ್ರೀ-ಪೇಯ್ಡ್ ಟಿಕೆಟ್‌ನಲ್ಲಿ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚುವರಿ ಹಣವನ್ನು ಪ್ರಯಾಣಿಕರಿಂದ ಪಡೆಯದಂತೆ ಆಟೋ ಚಾಲಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಯಿತು.

ಬೆಂಗಳೂರು–ತಾಳಗುಪ್ಪ ರೈಲಿನಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ ಪ್ರಯಾಣಿಕರು ಒಟ್ಟು 112 ಪ್ರೀ-ಪೇಯ್ಡ್ ಆಟೋ ಟಿಕೆಟ್‌ಗಳನ್ನು ಪಡೆದು ಪ್ರಯಾಣಿಸಿರುವುದು ಗಮನಕ್ಕೆ ಬಂದಿದೆ.

ರೈಲ್ವೆ ನಿಲ್ದಾಣದಿಂದ ಆಟೋದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕಡ್ಡಾಯವಾಗಿ ಪ್ರೀ-ಪೇಯ್ಡ್ ಕೌಂಟರ್‌ನಲ್ಲಿ ಟಿಕೆಟ್ ಪಡೆದು, ಅದರಲ್ಲಿ ನಮೂದಿಸಿರುವ ನಿಗದಿತ ದರದಂತೆ ಪ್ರಯಾಣಿಸುವಂತೆ ಪೊಲೀಸರು ಜಾಗೃತಿ ಮೂಡಿಸಿದರು. ಇದರಿಂದ ಪ್ರಯಾಣಿಕರಿಗೆ ಸುರಕ್ಷಿತ ಹಾಗೂ ಪಾರದರ್ಶಕ ಆಟೋ ಸೇವೆ ದೊರೆಯಲಿದೆ ಎಂದು ತಿಳಿಸಿದರು.

ಕಾರ್ಯಾಚರಣೆಯಲ್ಲಿ ಶಿವಮೊಗ್ಗ ಸಂಚಾರ ವೃತ್ತದ ಸಿಪಿಐ ದೇವರಾಜ್ ಟಿ.ವಿ., ಪೂರ್ವ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ನಾಗರಾಜ್ ಹೆಚ್.ಎನ್. ಸೇರಿದಂತೆ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

Related posts

ನಾಡಹಬ್ಬ ದಸರಾ ವೈಭವದ ಆಚರಣೆಗೆ ಸಕಲ ಸಿದ್ಧತೆ – ನಟ ಶ್ರೀನಾಥ್‌ರಿಂದ ದಸರಾ ಉದ್ಘಾಟನೆ : ಶಾಸಕ ಚನ್ನಬಸಪ್ಪ

JanaNota Editor

ಎಫ್‌ಸಿ, ವಿಮೆ ಇಲ್ಲದೆ ಸಂಚಾರ: 70 ಆಟೋಗಳು ಪೊಲೀಸರ ವಶಕ್ಕೆ

JanaNota Editor

ರಾಜ್ಯಾದ್ಯಂತ ಒಂದು ವರ್ಷ ಕೃತಕ ಪನ್ನೀರ್ ನಿಷೇಧ

JanaNota Editor