ಜನ ನೋಟ
ಕ್ರೈಂ ನ್ಯೂಸ್

ಅರಸಾಳು ಬಳಿ 20 ಅಡಿ ಆಳದ ಕಂದಕಕ್ಕೆ ಬಿದ್ದ ಲಾರಿ

ವರದಿ: ಸನತ್ ಶಿವಮೊಗ್ಗ 

ರಿಪ್ಪನ್ ಪೇಟೆ: ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ರಸ್ತೆ ಬದಿಯ ಸುಮಾರು 20 ಅಡಿ ಆಳದ ಕಂದಕಕ್ಕೆ ಉರುಳಿದ ಘಟನೆ ರಿಪ್ಪನ್ ಪೇಟೆ ಸಮೀಪದ ಅರಸಾಳು ಕೆರೆ ಏರಿ ಬಳಿ ನಡೆದಿದೆ.

ಮಂಗಳೂರಿನಿಂದ ಬಳ್ಳಾರಿಗೆ ಕೋಕ್ ತುಂಬಿಕೊಂಡು ತೆರಳುತ್ತಿದ್ದ ಲಾರಿ ಅರಸಾಳು ಕೆರೆ ಏರಿ ಬಳಿ ಸಂಚರಿಸುತ್ತಿದ್ದ ವೇಳೆ, ಎದುರಿನಿಂದ ದ್ವಿಚಕ್ರ ವಾಹನವೊಂದು ಬಂದಿದೆ. ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಲಾರಿ ಚಾಲಕ ಏಕಾಏಕಿ ವಾಹನವನ್ನು ಬದಿಗೆ ತಿರುಗಿಸಲು ಪ್ರಯತ್ನಿಸಿದ ವೇಳೆ ನಿಯಂತ್ರಣ ಕಳೆದುಕೊಂಡಿದ್ದಾನೆ ಎನ್ನಲಾಗಿದೆ.

ನಿಯಂತ್ರಣ ತಪ್ಪಿದ ಲಾರಿ ರಸ್ತೆ ಬದಿಗೆ ಚಲಿಸಿ, ಸುಮಾರು 20 ಅಡಿ ಆಳದ ಕಂದಕಕ್ಕೆ ಉರುಳಿದೆ. ಲಾರಿ ಕಂದಕಕ್ಕೆ ಉರುಳಿದ ಪರಿಣಾಮ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಲಾರಿ ಕಂದಕಕ್ಕೆ ಬಿದ್ದ ಕೂಡಲೇ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಕಂದಕಕ್ಕೆ ಬಿದ್ದಿದ್ದ ಲಾರಿಯಲ್ಲಿದ್ದ ಚಾಲಕನನ್ನು ಸ್ಥಳೀಯರು ಸುರಕ್ಷಿತವಾಗಿ ಮೇಲಕ್ಕೆ ಕರೆತಂದಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಚಾಲಕ ಅಪಾಯದಿಂದ ಪಾರಾಗಿದ್ದಾರೆ.

ಅಪಘಾತದ ಪರಿಣಾಮ ಲಾರಿ ರಸ್ತೆ ಬದಿಯಲ್ಲಿ ಬಿದ್ದಿದ್ದರಿಂದ ಈ ಮಾರ್ಗದಲ್ಲಿ ಕೆಲಕಾಲ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಎದುರಿನಿಂದ ಬಂದ ದ್ವಿಚಕ್ರ ವಾಹನವನ್ನು ತಪ್ಪಿಸಲು ಹೋಗಿ ಲಾರಿ ಚಾಲಕ ನಿಯಂತ್ರಣ ಕಳೆದುಕೊಂಡಿರುವುದು ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ.

Related posts

ಶಿವಮೊಗ್ಗದ ಹಾರನಹಳ್ಳಿ ಬಳಿ ಕಟ್ಟಿದ್ದ ನಾಯಿಯನ್ನು ಕೊಂದು ಎಳೆದೊಯ್ದ ಚಿರತೆ:ಗ್ರಾಮಸ್ಥರಲ್ಲಿ ಆತಂಕ

JanaNota Editor

ತಾತನನ್ನೇ ಕೊಲೆ ಮಾಡಿಸಿದ 13 ವರ್ಷದ ಬಾಲಕಿ!

JanaNota Editor

ಬಾರ್ ಡಾನ್ಸರ್ ಮೇಲಿನ ಹುಚ್ಚು ಪ್ರೀತಿಗೆ 657 ಕೋಟಿ ಸರ್ಕಾರಿ ಹಣ ಲೂಟಿ ಮಾಡಿದ ಬ್ಯಾಂಕ್ ಮ್ಯಾನೇಜರ್

JanaNota Editor