ಜನ ನೋಟ
ಕ್ರೈಂ ನ್ಯೂಸ್

ಪತ್ನಿಯ ಸಾವಿನಿಂದ ದುಃಖಿತರಾಗಿದ್ದ ಪತಿ, ಪತ್ನಿಯ ಅಂತ್ಯಕ್ರಿಯೆಗೆ ವೇಳೆ ಸಾವು

ದಾವಣಗೆರೆ: ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಯ ಸಾವಿನಿಂದ ತೀವ್ರ ದುಃಖಿತರಾಗಿದ್ದ ಪತಿ, ಪತ್ನಿಯ ಅಂತ್ಯಕ್ರಿಯೆಗೆ ತಯಾರಿ ನಡೆಸುವ ವೇಳೆ ಸಾವನ್ನಪ್ಪಿದ ಘಟನೆ ದಾವಣಗೆರೆ ತಾಲೂಕಿನ ಹದಡಿ ಗ್ರಾಮದಲ್ಲಿ ನಡೆದಿದೆ.

ಮಲ್ಲಜ್ಜ (75) ಹಾಗೂ ಸಿದ್ದಜ್ಜಿ (70) ಸಾವನ್ನಪ್ಪಿದವರು. ಇವರು 55 ವರ್ಷ ವೈವಾಹಿಕ ಜೀವನ ನಡೆಸಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಭಾನುವಾರ ರಾತ್ರಿ 11 ಗಂಟೆಗೆ ವಯೋಸಹಜ ಕಾಯಿಲೆಯಿಂದ ಸಿದ್ದಜ್ಜಿ ನಿಧನರಾಗಿದ್ದರು. ಮಲ್ಲಜ್ಜ ರಾತ್ರಿಯಿಡೀ ಕೊರಗಿದ್ದರಂತೆ. ಇಂದು ಬೆಳಗ್ಗೆ ಕುಟುಂಬಸ್ಥರು ಅಂತ್ಯಸಂಸ್ಕಾರಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿರುವಾಗ ಅವರೂ ಸಾವನ್ನಪ್ಪಿದರು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ‌ ಮೊಮ್ಮಕ್ಕಳು, ಮರಿಮಕ್ಕಳನ್ನು ದಂಪತಿ ಅಗಲಿದ್ದಾರೆ. ಇಬ್ಬರನ್ನೂ ಕಳೆದುಕೊಂಡ ಬಂಧು ಬಳಗದ ಆಕ್ರಂದನ ಮುಗಿಲು ಮುಟ್ಟಿತ್ತು.

Related posts

ಕಳೆದುಹೋಗಿದ್ದ , ಕಳುವಾಗಿದ್ದ ಮೊಬೈಲ್‌ ವಾರಸುದಾರರಿಗೆ ಹಸ್ತಾಂತರ

JanaNota Editor

ವಿದ್ಯುತ್ ತಗುಲಿ ನವಿಲು , ಚಿರತೆ ಸಾವು

JanaNota Editor

ಬಾರ್ ಡಾನ್ಸರ್ ಮೇಲಿನ ಹುಚ್ಚು ಪ್ರೀತಿಗೆ 657 ಕೋಟಿ ಸರ್ಕಾರಿ ಹಣ ಲೂಟಿ ಮಾಡಿದ ಬ್ಯಾಂಕ್ ಮ್ಯಾನೇಜರ್

JanaNota Editor