ಬೆಂಗಳೂರು: ರಾಜ್ಯ ಸರ್ಕಾರ ಜಿಲ್ಲಾ ಪಂಚಾಯಿತಿ (ಜಿಪಂ) ಹಾಗೂ ತಾಲೂಕು ಪಂಚಾಯಿತಿ (ತಾಪಂ) ಕ್ಷೇತ್ರಗಳ ಮರುವಿಂಗಡಣೆ ಮಾಡಿ 3ನೇ ಬಾರಿಗೆ ಅಧಿಸೂಚನೆ ಹೊರಡಿಸಿದೆ. 2ನೇ ಅಧಿಸೂಚನೆಯಲ್ಲಿದ್ದಂತೆ ಜಿಲ್ಲೆಯಲ್ಲಿ ಒಟ್ಟು ಜಿಪಂ ಕ್ಷೇತ್ರಗಳು, ಜಿಪಂನ ಮೀಸಲು ಸ್ಥಾನಗಳು ಹಾಗೂ ತಾಪಂ ಕ್ಷೇತ್ರಗಳ ಸಂಖ್ಯೆಯನ್ನು ಮುಂದುವರಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 39 ಜಿಪಂ ಹಾಗೂ 113 ತಾಪಂ ಕ್ಷೇತ್ರಗಳನ್ನು ಗುರುತಿಸಲಾಗಿದೆ. 2021ರ ಬಳಿಕ ಹೊರಡಿಸಿರುವ 3ನೇ ಅಧಿಸೂಚನೆ ಇದಾಗಿದೆ.
ಕರಡು ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಸರ್ಕಾರ ಅವಕಾಶ ನೀಡಿದ್ದು, ಅ.19ರ ಸಂಜೆ 5 ಗಂಟೆಯೊಳಗೆ ಬೆಂಗಳೂರಿನ ಬಹುಮಹಡಿ ಕಟ್ಟಡದಲ್ಲಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಲಿಖಿತ ಆಕ್ಷೇಪಣೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಜಿಪಂ ಕ್ಷೇತ್ರಗಳ ಮೀಸಲಾತಿ
ಮೂಡಿ–ಸಾಮಾನ್ಯ, ಜಡೆ–ಹಿಂದುಳಿದ ವರ್ಗ ‘ಬಿ’ (ಮಹಿಳೆ), ತತ್ತೂರು–ಅನುಸೂಚಿತ ಜಾತಿ (ಮಹಿಳೆ), ಕುಪ್ಪಗಡ್ಡೆ–ಸಾಮಾನ್ಯ (ಮಹಿಳೆ), ಉದ್ರಿ–ಸಾಮಾನ್ಯ (ಮಹಿಳೆ), ಉಳವಿ–ಹಿಂದುಳಿದ ವರ್ಗ ‘ಎ’ (ಮಹಿಳೆ), ಚಂದ್ರಗುತ್ತಿ–ಸಾಮಾನ್ಯ (ಮಹಿಳೆ), ಈಸೂರು–ಸಾಮಾನ್ಯ (ಮಹಿಳೆ), ಹೊಸೂರು–ಅನುಸೂಚಿತ ಪಂಗಡ, ಕಪ್ಪನಹಳ್ಳಿ–ಅನುಸೂಚಿತ ಜಾತಿ.
ಸುಣ್ಣದಕೊಪ್ಪ–ಸಾಮಾನ್ಯ, ತೊಗರ್ಸಿ–ಅನುಸೂಚಿತ ಜಾತಿ (ಮಹಿಳೆ), ಹೊಸನಗರ–ಸಾಮಾನ್ಯ (ಮಹಿಳೆ), ಮಾರುತಿಪುರ–ಹಿಂದುಳಿದ ವರ್ಗ ‘ಬಿ’, ರಿಪ್ಪನ್ಪೇಟೆ–ಅನುಸೂಚಿತ ಜಾತಿ, ಹುಂಚ–ಹಿಂದುಳಿದ ವರ್ಗ ‘ಎ’, ನಗರ–ಸಾಮಾನ್ಯ, ಗಾಜನೂರು–ಸಾಮಾನ್ಯ, ಹಾರನಹಳ್ಳಿ–ಅನುಸೂಚಿತ ಪಂಗಡ (ಮಹಿಳೆ), ಹೊಳಲೂರು–ಸಾಮಾನ್ಯ (ಮಹಿಳೆ).
ಹಸೂಡಿ–ಅನುಸೂಚಿತ ಜಾತಿ (ಮಹಿಳೆ), ಕುಂಸಿ–ಹಿಂದುಳಿದ ವರ್ಗ ‘ಬಿ’, ಆನವೇರಿ–ಸಾಮಾನ್ಯ, ಅರಬಿಳಚಿ–ಹಿಂದುಳಿದ ವರ್ಗ ‘ಎ’ (ಮಹಿಳೆ), ಕೂಡ್ಲಿಗೆರೆ–ಸಾಮಾನ್ಯ (ಮಹಿಳೆ), ಹಿರಿಯೂರು–ಅನುಸೂಚಿತ ಜಾತಿ, ಸಿಂಗನಮನೆ–ಹಿಂದುಳಿದ ವರ್ಗ ‘ಎ’ (ಮಹಿಳೆ), ಕೋಣಂದೂರು–ಅನುಸೂಚಿತ ಜಾತಿ (ಮಹಿಳೆ), ಹೊದಲಾ-ಅರಳಾಪುರ–ಸಾಮಾನ್ಯ (ಮಹಿಳೆ), ಲಿಂಗಾಪುರ–ಸಾಮಾನ್ಯ.
ಕುಪ್ಪಳ್ಳಿ–ಹಿಂದುಳಿದ ವರ್ಗ ‘ಎ’ (ಮಹಿಳೆ), ಮೇಗರವಳ್ಳಿ–ಹಿಂದುಳಿದ ವರ್ಗ ‘ಎ’, ಆರಗ–ಸಾಮಾನ್ಯ, ಕೆಳದಿ–ಸಾಮಾನ್ಯ, ಕೊರ್ಲಿಕೊಪ್ಪ–ಸಾಮಾನ್ಯ, ಆನಂದಪುರ–ಅನುಸೂಚಿತ ಜಾತಿ, ಆವಿನಹಳ್ಳಿ–ಸಾಮಾನ್ಯ (ಮಹಿಳೆ), ಕುದರೂರು–ಸಾಮಾನ್ಯ (ಮಹಿಳೆ), ತಾಳಗುಪ್ಪ–ಸಾಮಾನ್ಯ.
ಮೀಸಲಾತಿ ವಿವರ
ಒಟ್ಟು ಜಿಪಂ ಕ್ಷೇತ್ರಗಳು: 39
ಸಾಮಾನ್ಯ – ಪುರುಷ: 10
ಸಾಮಾನ್ಯ – ಮಹಿಳೆ: 10
ಅನುಸೂಚಿತ ಜಾತಿ – ಪುರುಷ: 4
ಅನುಸೂಚಿತ ಜಾತಿ – ಮಹಿಳೆ: 4
ಅನುಸೂಚಿತ ಪಂಗಡ – ಪುರುಷ: 1
ಅನುಸೂಚಿತ ಪಂಗಡ – ಮಹಿಳೆ: 1
ಹಿಂದುಳಿದ ವರ್ಗ ‘ಎ’ – ಪುರುಷ: 3
ಹಿಂದುಳಿದ ವರ್ಗ ‘ಎ’ – ಮಹಿಳೆ: 4
ಹಿಂದುಳಿದ ವರ್ಗ ‘ಬಿ’ – ಪುರುಷ: 1
ಹಿಂದುಳಿದ ವರ್ಗ ‘ಬಿ’ – ಮಹಿಳೆ: 1
