ಶಿವಮೊಗ್ಗ: ವಿಶ್ವದ ಪ್ರಮುಖ ಚಿನ್ನ ಮತ್ತು ವಜ್ರಾಭರಣಗಳ ಚಿಲ್ಲರೆ ಮಾರಾಟ ಸರಪಳಿಗಳಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ಆಯೋಜಿಸಿರುವ ಸಿಲ್ವರ್ ಶೋಗೆ ಶಿವಮೊಗ್ಗದಲ್ಲಿ ಚಾಲನೆ ನೀಡಲಾಯಿತು.
ಆಗಸ್ಟ್ 14ರಿಂದ 23ರವರೆಗೆ ನಡೆಯಲಿರುವ ಸಿಲ್ವರ್ ಶೋವನ್ನು ಮುಖ್ಯ ಅತಿಥಿಗಳಾದ ಸಂಜನಾ ಹಾಗೂ ವರ್ಷಿಣಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥ ರಿಷಿಕೇಶ್, ಸಿಬ್ಬಂದಿ ವರ್ಗ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.
ಸಿಲ್ವರ್ ಶೋ ಅಂಗವಾಗಿ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಲಾಗಿದ್ದು, ಅನ್‌ಕಟ್ ಹಾಗೂ ಅಮೂಲ್ಯ ರತ್ನಾಭರಣಗಳ ಮೇಕಿಂಗ್ ಚಾರ್ಜ್‌ಗಳ ಮೇಲೆ ಶೇ.25ರ ವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಈ ವಿಶೇಷ ಕೊಡುಗೆ ಸೆಪ್ಟೆಂಬರ್ 14ರವರೆಗೆ ಲಭ್ಯವಿರಲಿದೆ ಎಂದು ಸಂಸ್ಥೆ ತಿಳಿಸಿದೆ.
ಗ್ರಾಹಕರು ವಿಶೇಷ ಕೊಡುಗೆಯ ಸದುಪಯೋಗ ಪಡೆದುಕೊಳ್ಳುವಂತೆ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಮನವಿ ಮಾಡಿದೆ.
