ಜನ ನೋಟ
ರಾಜ್ಯ

ಅ.13ರಂದು ನಟ ಪ್ರಭುದೇವರಿಂದ ಯುವ ದಸರಾ ಉದ್ಘಾಟನೆ

ಮೈಸೂರು: ಯುವ ದಸರಾ 2026 ಕಾರ್ಯಕ್ರಮವು ಪ್ರತಿದಿನ ‘ಹೊಸತನ ಸಂಗೀತದ ರಸದೌತಣ’ ಎಂಬ ಧೇಯ್ಯವಾಕ್ಯದೊಂದಿಗೆ ಅಕ್ಟೋಬರ್ 13 ರಿಂದ 17ರವರೆಗೆ ಒಟ್ಟು ಐದು ದಿನಗಳ ಕಾಲ ಸಂಜೆ 5:30ರಿಂದ ರಾತ್ರಿ 10:30ರವರೆಗೆ ಮೈಸೂರು ರಿಂಗ್ ರೋಡ್​​ನ ಜ್ವಾಲಾಮುಖಿ ತ್ರಿಪುರಸುಂದರಿ ದೇವಸ್ಥಾನದ ಸಮೀಪ ನಡೆಯಲಿದೆ.

ಅಕ್ಟೋಬರ್13ರಂದು ಖ್ಯಾತ ನೃತ್ಯ ನಿರ್ದೇಶಕ ಹಾಗೂ ನಟ ಪ್ರಭುದೇವ ಅವರು ಯುವ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನಗರಾಭಿವೃದ್ಧಿ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಖ್ಯಾತ ಕಲಾವಿದರ ಕಾರ್ಯಕ್ರಮಗಳು ಪ್ರತಿದಿನ ರಾತ್ರಿ 7:30ರಿಂದ 10:30ರವರೆಗೆ ನಡೆಯಲಿವೆ.

ಅಕ್ಟೋಬರ್ 13ರಂದು ಹೆಸರಾಂತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಗೂ ಅವರ ತಂಡದ ಗಾಯಕರಾದ ಆಬಿ.ಬಿ., ನಕಾಶ್ ಅಜೀಜ್, ವಾಸುಕಿ ವೈಭವ್, ಸಾಯಿ ವಿಘ್ನೇಶ್, ಅನನ್ಯಾ ಭಟ್, ಮಂಗ್ಲಿ, ಜಸ್ಕರನ್ ಸಿಂಗ್, ಐಶ್ವರ್ಯ ರಂಗರಾಜನ್, ಗಾಯಕರಾದ ಸಿ.ಆರ್. ಬಾಬಿ, ಹರ್ಷಿಕಾ ದೇವನಾಥ್, ಅನಿರುದ್ದ ಶಾಸ್ತ್ರಿ, ಇಂದು ನಾಗರಾಜ್ ಹಾಗೂ ಶೇ಼ಷಾಂಕ್ ಶೇಷಗಿರಿ ಅವರು ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.

ಅಕ್ಟೋಬರ್ 14ರಂದು ಭಾರತದ ಹೆಸರಾಂತ ಸಂಗೀತ ನಿರ್ದೇಶಕರು ಮತ್ತು ಗಾಯಕರಾದ ಶಂಕರ್-ಎಹಸಾನ್-ಲಾಯ್ ಅವರ ಸಂಗೀತ ಕಾರ್ಯಕ್ರಮ ಜರುಗಲಿದೆ.

ಅಕ್ಟೋಬರ್ 15ರಂದು ಸುಪ್ರಸಿದ್ಧ ಬಹುಭಾಷ ಗಾಯಕರಾದ ಸಿಡ್ ಶ್ರೀರಾಮ್ ಅವರು ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.

ಅಕ್ಟೋಬರ್ 16ರಂದು ಸ್ಯಾಂಡಲ್​​ವುಡ್ ನೈಟ್ಸ್ ವತಿಯಿಂದ ನಟ ಶಿವರಾಜ್ ಕುಮಾರ್, ನಟಿ ರಚಿತಾ ರಾಮ್ ಭಾಗಿಯಾಗಲಿದ್ದು, ಹೆಸರಾಂತ ಗಾಯಕರಾದ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಚಂದನ್ ಶೆಟ್ಟಿ, All ok, ಅನುರಾಧಾ ಭಟ್ ಅವರಿಂದ ಕಾರ್ಯಕ್ರಮವಿದೆ.

Related posts

ಚಿತ್ರದುರ್ಗ : ಪ್ರವಾಸಿ ಬಸ್ ಪಲ್ಟಿ : ಮೂವರು ನರ್ಸಿಂಗ್ ವಿದ್ಯಾರ್ಥಿಗಳು ಸಾವು, 20 ಜನರಿಗೆ ಗಾಯ

JanaNota Editor

ಶಾಲೆಯಲ್ಲಿ ಬಿಸಿಯೂಟ ಸೇವಿಸುತ್ತಿದ್ದ 9ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವು

JanaNota Editor

ಪತ್ನಿಯ ಅಂತ್ಯಕ್ರಿಯೆ ಸಿದ್ಧತೆ ವೇಳೆ ಪತಿಯೂ ಸಾವು

JanaNota Editor